CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಯೋಜನೆ

Submitted by shahrukh on Thu, 02/05/2024 - 13:14
CENTRAL GOVT CM
Scheme Open
Highlights
  • CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿ ವೇತನ ಯೋಜನೆ ಅಡಿ ತೊಳೆಯಬಹುದಾದ ಪ್ರಯೋಜನಗಳು ಈ ಕೆಳಗಿನಂತಿವೆ :-
    • 2 ವರ್ಷಗಳವರೆಗೆ 11 ನೇ ಮತ್ತು 12 ನೇ ತರಗತಿ) ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
    • ಮಾಸಿಕ ವಿದ್ಯಾರ್ಥಿವೇತನ ರೂ. 500/- ಪ್ರತಿ ತಿಂಗಳಿಗೆ ನೀಡಲಾಗುವುದು.
Customer Care
  • CBSE ಕಾಲ್ ಸೆಂಟರ್ ಟೋಲ್ ಫ್ರೀ ಸಂಖ್ಯೆ :- 1800118002.
  • CBSE ವಿದ್ಯಾರ್ಥಿವೇತನ ಸಹಾಯವಾಣಿ ಸಂಖ್ಯೆ :- 011-22526745.
  • CBSE ವಿದ್ಯಾರ್ಥಿವೇತನ ಸಹಾಯವಾಣಿ ಇಮೇಲ್ :- scholarship.cbse@nic.in.
ಯೋಜನೆಯ ವಿವರಣೆ
ಯೋಜನೆಯ ಹೆಸರು CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಯೋಜನೆ.
ದಿನಾಂಕ 2006.
ಪ್ರಯೋಜನಗಳು ರೂ. 500/- ಮಾಸಿಕ ವಿದ್ಯಾರ್ಥಿವೇತನ.
ಫಲಾನುಭವಿಯರು ಒಂಟಿ ಹೆಣ್ಣು ಮಕ್ಕಳು.
ನೋಡಲ್ ಏಜೆನ್ಸಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್.
ಚಂದಾದಾರಿಕೆ ಯೋಜನೆಯ ನಿಯಮಿತ ನವೀಕರಣಗಳನ್ನು ಪಡೆಯಲು ಚಂದದಾರರಾಗಿ.
ಅರ್ಜಿಯ ವಿಧಾನ CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಯೋಜನೆ ಆನ್ಲೈನ್ ಅಪ್ಲಿಕೇಶನ್ ಫಾರ್.

ಯೋಜನೆಯ ಪರಿಚಯ

  • ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿ ವೇತನ ಯೋಜನೆಯನ್ನು 2006 ರಿಂದ ಪ್ರಾರಂಭ ಮಾಡಿದೆ.
  • ಈ ಯೋಜನೆಯನ್ನು ಜಾರಿಗೊಳಿಸುವ ಹಿಂದೆ ಮುಖ್ಯ ಉದ್ದೇಶವೇನೆಂದರೆ, ವಿದ್ಯಾರ್ಥಿನಿಯರಿಗೆ ಶಿಕ್ಷಣವನ್ನು ಪಡೆಯಲು ಪ್ರೋತ್ಸಾಹ ನೀಡುವುದು.
  • ಯೋಜನೆಯ ಹೆಸರಿನಂತೆ ಈ ಯೋಜನೆ ಫಲಾನುಭವಿಯರು ಪೋಷಕರಿಗೆ ಒಂಟಿ ಹೆಣ್ಣು ಮಕ್ಕಳಿದ್ದಾಗ ಮಾತ್ರ ಪ್ರಯೋಜನವನ್ನು ಪಡೆಯಬಹುದು.
  • ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿ ವೇತನ ಯೋಜನೆ ಅಡಿ CBSE ಡಿಪಾರ್ಟ್ಮೆಂಟ್ ವತಿಯಿಂದ ಮಾಸಿಕ ವಿದ್ಯಾರ್ಥಿ ವೇತನ ಒದಗಿಸಲಾಗುವುದು.
  • ಈ ಯೋಜನೆಯನ್ನು ಇತರ ಹೆಸರಿನಿಂದಲೂ ಕರೆಯಲಾಗುತ್ತದೆ ಅಂದರೆ "ಒಂಟಿ ಹೆಣ್ಣು ಮಗುವಿಗೆ CBSE ಮೆರಿಟ್ ವಿದ್ಯಾರ್ಥಿವೇತನ ಯೋಜನೆ".
  • ಈ ಯೋಜನೆಯಡಿಯಲ್ಲಿ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು ರೂ. 500/- ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
  • 10 ನೇ ತರಗತಿ ಪರೀಕ್ಷೆಯಲ್ಲಿ 60% ಅಂಕಗಳೊಂದಿಗೆ ಉತ್ತೀರ್ಣರಾದ ಮತ್ತು ಪ್ರಸ್ತುತ CBSE ಸಂಯೋಜಿತ ಶಾಲೆಯಲ್ಲಿ 11 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ಮಾತ್ರ ಅರ್ಹರಾಗಿರುತ್ತಾರೆ.
  • CBSE ಯ ಒಂಟಿ ಹೆಣ್ಣು ಮಕ್ಕಳ ಸ್ಕಾಲರ್‌ಶಿಪ್ ಯೋಜನೆಯಡಿ ವಿದ್ಯಾರ್ಥಿವೇತನವನ್ನು 2 ವರ್ಷಗಳವರೆಗೆ ಅಂದರೆ 11ನೇ ತರಗತಿ ಮತ್ತು 12ನೇ ತರಗತಿಯವರೆಗೆ ನೀಡಲಾಗುತ್ತದೆ.
  • ಈ ಯೋಜನೆಯಡಿಯಲ್ಲಿ ಸಲ್ಲಿಸಲು NRI ವಿದ್ಯಾರ್ಥಿನಿಯರು ಕೂಡ ಅರ್ಹರು.
  • 11ನೇ ತರಗತಿಯ ನಂತರ ಸಿ ಬಿ ಎಸ್ ಸಿ ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿ ವೇತನ ಯೋಜನೆಯಲ್ಲಿಅರ್ಜಿಯನ್ನು ನವೀಕರಿಸುವುದು ಕಡ್ಡಾಯವಾಗಿರುತ್ತದೆ, ಇದರ ಜೊತೆಗೆ ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು.
  • ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್‌ನ ಒಂಟಿ ಹೆಣ್ಣು ಮಗುವಿಗೆ ಮೆರಿಟ್ ಸ್ಕಾಲರ್‌ಶಿಪ್ ಯೋಜನೆಯ 2023-2024 ರ ಅರ್ಜಿಯನ್ನು ತೆರೆಯಲಾಗಿದೆ.
  • ವಿದ್ಯಾರ್ಥಿನಿಯರು ಈ ಯೋಜನೆಯಡಿ ಆನ್ಲೈನ್ ಅಪ್ಲಿಕೇಶನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 18/10/2023 ಆಗಿರುತ್ತದೆ.

ಪ್ರಯೋಜನಗಳು

  • CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿ ವೇತನ ಯೋಜನೆ ಅಡಿ ತೊಳೆಯಬಹುದಾದ ಪ್ರಯೋಜನಗಳು ಈ ಕೆಳಗಿನಂತಿವೆ :-
    • 2 ವರ್ಷಗಳವರೆಗೆ 11 ನೇ ಮತ್ತು 12 ನೇ ತರಗತಿ) ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
    • ಮಾಸಿಕ ವಿದ್ಯಾರ್ಥಿವೇತನ ರೂ. 500/- ಪ್ರತಿ ತಿಂಗಳಿಗೆ ನೀಡಲಾಗುವುದು.

ಹೊಸ ಅರ್ಜಿಯ ಅರ್ಹತೆ

  • CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿ ವೇತನ ಯೋಜನೆ ಸಲ್ಲಿಸಲು ಈ ಕೆಳಗಿನ ಶರತ್ತುಗಳನ್ನು ಅನ್ವಯಿಸಲಾಗುವುದು :-
    • ವಿದ್ಯಾರ್ಥಿನಿಯು ತನ್ನ ಪೋಷಕರ ಒಂಟಿ ಮಗುವಾಗಿರಬೇಕು.
    • ವಿದ್ಯಾರ್ಥಿನಿ 10ನೇ ತರಗತಿ ತೇರ್ಗಡೆಯಾಗಿರಬೇಕು.
    • ವಿದ್ಯಾರ್ಥಿನಿಯರು ಪ್ರಸ್ತುತ 11 ನೇ ತರಗತಿಯಲ್ಲಿ ಯಾವುದೇ CBSE ಸಂಯೋಜಿತ ಶಾಲೆಯಲ್ಲಿ ಓದುತ್ತಿರಬೇಕು.
    • ವಿದ್ಯಾರ್ಥಿನಿಯರು 10 ನೇ ತರಗತಿಯಲ್ಲಿ ಮೊದಲ ಐದು ವಿಷಯಗಳಲ್ಲಿ 60% ಅಂಕಗಳನ್ನು ಹೊಂದಿರಬೇಕು.
    • ವಿದ್ಯಾರ್ಥಿನಿಯರ ಮಾಸಿಕ ಬೋಧನಾ ಶುಲ್ಕ ರೂ.1,500/- ಪ್ರತಿ ತಿಂಗಳು ಗಿಂತ ಹೆಚ್ಚಿರಬಾರದು.

ವಿದ್ಯಾರ್ಥಿ ವೇತನ ಅರ್ಜಿಯನ್ನು ನವೀಕರಿಸಲು ಅರ್ಹತೆ :-

  • CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಯೋಜನೆಯನ್ನು ನವೀಕರಿಸುವ ಸಮಯದಲ್ಲಿ ಕೆಳಗೆ ತಿಳಿಸಲಾದ ಅರ್ಹತಾ ಷರತ್ತುಗಳನ್ನು ಪೂರೈಸುವುದು ಅಗತ್ಯವಿರುತ್ತದೆ :-
    • ಹೆಣ್ಣು ವಿದ್ಯಾರ್ಥಿಯು ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನವನ್ನು ಸ್ವೀಕರಿಸುವವರಾಗಿರಬೇಕು.
    • ವಿದ್ಯಾರ್ಥಿನಿಯಯು 11 ನೇ ತರಗತಿಯಲ್ಲಿ ಕನಿಷ್ಠ 50% ಅಂಕಗಳನ್ನು ಗಳಿಸಬೇಕು.

ವಿದ್ಯಾರ್ಥಿ ವೇತನಕ್ಕೆ ಬೇಕಾದ ದಾಖಲೆಗಳು :

  • CBSE ಯ ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಕೆಳಗೆ ತಿಳಿಸಲಾದ ದಾಖಲೆಗಳು ಅಗತ್ಯವಾಗಿರುತ್ತದೆ :-
    • 10 ನೇ ತರಗತಿಯ ರೋಲ್ ಸಂಖ್ಯೆ.
    • 10 ನೇ ತರಗತಿಯ ಅಂಕಪಟ್ಟಿ.
    • 10 ನೇ ತರಗತಿಯ ಪ್ರಮಾಣಪತ್ರ.
    • ಆದಾಯ ಪ್ರಮಾಣಪತ್ರ.
    • ಜಾತಿ ಪ್ರಮಾಣ ಪತ್ರ. (ಅನ್ವಯವಾದಲ್ಲಿ)
    • ಮೊಬೈಲ್ ನಂಬರ.
    • ಪಾಸ್ಪೋರ್ಟ್ ಗಾತ್ರದ ಫೋಟೋ.

ಅರ್ಜಿ ಸಲ್ಲಿಸುವ ವಿಧಾನ

  • ಒಂಟಿ ಹೆಣ್ಣು ಮಕ್ಕಳು ಮಾಸಿಕ ವಿದ್ಯಾರ್ಥಿ ವೇತನ CBSE ಒಂಟೆ ಹೆಣ್ಣು ಮಕ್ಕಳ ವಿದ್ಯಾರ್ಥಿ ವೇತನ ಯೋಜನೆ ಅಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
  • CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಯೋಜನೆಯ ಆನ್‌ಲೈನ್ ಅರ್ಜಿ ನಮೂನೆಯು CBSE ಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
  • ಈ ಯೋಜನೆಯ ಅಡಿ ಅರ್ಜಿಯನ್ನು ಸೋಲಿಸಲು ಯಾವುದೇ ರೀತಿಯ ಖಾತೆ ಅಥವಾ ನೋಂದಣಿ ಮಾಡುವಂತಿಲ್ಲ.
  • CBSE ಯ ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿ ಸಲ್ಲಿಸಲು 10 ನೇ ತರಗತಿಯ ರೋಲ್ ಸಂಖ್ಯೆ ಮತ್ತು ಹೆಣ್ಣು ಮಗುವಿನ ಜನ್ಮ ದಿನಾಂಕ ಸಾಕು.
  • 10ನೇ ತರಗತಿ ರೂಲ್ಸ್ ಸಂಖ್ಯೆಯನ್ನು ಹಾಗೂ ಜನ್ಮ ದಿನಾಂಕ ನಮೂದಿಸುವ ಮೂಲಕ ಸಲ್ಲಿಸು ಬಟನ್ ಅನ್ನು ಒತ್ತಿ.
  • CBSE ಪೋರ್ಟಲ್ ನಲ್ಲಿ ಪರಿಶೀಲನೆ ನಂತರ ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿ ವೇತನ ಯೋಜನೆಯ ಅರ್ಜಿಯನ್ನು ಪಡೆಯಬಹುದು.
  • ಆನ್‌ಲೈನ್ ಅರ್ಜಿ ನಮೂನೆಯಲ್ಲಿ ವೈಯಕ್ತಿಕ ವಿವರಗಳು, ಸಂಪರ್ಕ ವಿವರಗಳು, ಬ್ಯಾಂಕ್ ಖಾತೆ ವಿವರಗಳಂತಹ ಮೂಲ ವಿವರಗಳನ್ನು ಭರ್ತಿ ಮಾಡಿ.
  • ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಲಗತ್ತಿಸಿ.
  • CBSE ಸಿಂಗಲ್ ಗರ್ಲ್ ಚೈಲ್ಡ್ ಸ್ಕಾಲರ್‌ಶಿಪ್ ಸ್ಕೀಮ್ ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಿ ಮತ್ತು ನಂತರ ಅದನ್ನು ಸಲ್ಲಿಸಿ.
  • CBSE ಪೋರ್ಟಲ್ ಅಪ್ಲಿಕೇಶನ್ ಸಂಖ್ಯೆಯನ್ನು ರಚಿಸುತ್ತದೆ.
  • ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ನಮೂನೆಯ ದೃಢೀಕರಣ ಪುಟದ ಪ್ರಿಂಟ್ ಔಟ್ ತೆಗೆದುಕೊಳ್ಳಿ.
  • ಒಂಟಿ ಹೆಣ್ಣು ಮಕ್ಕಳ ಶಾಲೆಯಿಂದ ಸಲ್ಲಿಸಲಾದ ಅರ್ಜಿಯನ್ನು ಪರಿಶೀಲಿಸಲಾಗುತ್ತದೆ.
  • ಪರಿಶೀಲನೆಯ ನಂತರ, ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಯೋಜನೆಯಡಿಯಲ್ಲಿ ಮಾಸಿಕ ವಿದ್ಯಾರ್ಥಿವೇತನವನ್ನು ನೇರವಾಗಿ ಹೆಣ್ಣು ಮಗುವಿನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
  • ಫಲಾನುಭವಿ ಹೆಣ್ಣು CBSE ಪೋರ್ಟಲ್‌ನಲ್ಲಿ CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಯೋಜನೆಯ ಅರ್ಜಿಯ ಸ್ಥಿತಿಯನ್ನುಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು.
  • 11ನೇ ತರಗತಿಯ ನಂತರ ವಿದ್ಯಾರ್ಥಿನಿಯರು ಮಾಸಿಕ ವಿದ್ಯಾರ್ಥಿ ವೇತನವನ್ನು ಪಡೆಯಲು ಅರ್ಜಿಯನ್ನು ನವೀಕರಿಸುವುದು ಕಡ್ಡಾಯವಾಗಿರುತ್ತದೆ.
  • 2023-24 ವರ್ಷದ ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿ ವೇತನ ಯೋಜನೆ ನವೀಕರಿಸುವುದು ಇದೀಗ ಪ್ರಾರಂಭವಾಗಿದೆ.
  • CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿ ವೇತನ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ 18/10/2023 ಆಗಿದೆ.

ಅಗತ್ಯವಾದ ಲಿಂಕ್

ಸಂಪರ್ಕ ವಿವರಗಳು

  • CBSE ಕಾಲ್ ಸೆಂಟರ್ ಟೋಲ್ ಫ್ರೀ ಸಂಖ್ಯೆ :- 1800118002.
  • CBSE ವಿದ್ಯಾರ್ಥಿವೇತನ ಸಹಾಯವಾಣಿ ಸಂಖ್ಯೆ :- 011-22526745.
  • CBSE ವಿದ್ಯಾರ್ಥಿವೇತನ ಸಹಾಯವಾಣಿ ಇಮೇಲ್ :- scholarship.cbse@nic.in.
  • ಕಾರ್ಯದರ್ಶಿ, CBSE,
    ಶಿಕ್ಷಾ ಕೇಂದ್ರ, 2, ಸಮುದಾಯ ಕೇಂದ್ರ,
    ಪ್ರೀತ್ ವಿಹಾರ್, ದಿಲ್ಲಿ,
    110092.

Comments

Add new comment

Plain text

  • No HTML tags allowed.
  • Lines and paragraphs break automatically.

Rich Format